ಅರ್ಹತೆ:

ವಿಷಯ
ಅರ್ಹತೆ
ಬಿ.ಎ. + 2 / ಪಿಯುಸಿ ಅಥವಾ ಸಮಾನ ಶ್ರೇಣಿಯ ಪದವಿಯಲ್ಲಿ ತೇರ್ಗಡೆ
ಬಿ. ಎಸ್ಸಿ. ವಿಜ್ಞಾನ ವಿಷಯಗಳೊಂದಿಗೆ + 2 / ಪಿಯುಸಿಯಲ್ಲಿ ತೇರ್ಗಡೆ
ಬಿ.ಕಾ೦. + 2 / ಪಿಯುಸಿಯಲ್ಲಿ ಅಥವಾ ವಾಣಿಜ್ಯ / ವ್ಯವಹಾರಿಕ ಅಧ್ಯಯನ ಮತ್ತು ಲೆಕ್ಕಶಾಸ್ತ್ರಗಳೊಂದಿಗೆ ತೇರ್ಗಡೆ
ಬಿ.ಬಿ.ಎ೦. + 2 / ಪಿಯುಸಿ ಅಥವಾ ಸಮಾನ ಶ್ರೇಣಿಯ ಪದವಿಯಲ್ಲಿ ತೇರ್ಗಡೆ
ಬಿ.ಸಿ.ಎ. +2 / ಪಿಯುಸಿಗಳಲ್ಲಿ ತೇರ್ಗಡೆ ಅಥವಾ ಅಂಕಗಳೊಂದಿಗೆ ಸಮಾನ ಶ್ರೇಣಿಯ ಪದವಿಯಲ್ಲಿ 45% (ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 40%) ಅಥವಾ ಎಲೆಕ್ಟ್ರಾನಿಕ್ಸ್ / ಗಣಕ ವಿಜ್ಞಾನದೊಂದಿಗೆ ಡಿಪ್ಲೊಮಾ.
ಬಿ.ಎಸ್.ಡಬ್ಲ್ಯೂ + 2 / ಪಿಯುಸಿ ಅಥವಾ ಸಮಾನ ಶ್ರೇಣಿಯ ಪದವಿಯಲ್ಲಿ ತೇರ್ಗಡೆ

 

ವಿಧಾನ:

ಪಿ.ಜಿ. ವಿಷಯಗಳಿಗೆ ಪ್ರವೇಶ ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗಳು ಸ೦ತ ಫಿಲೋಮಿನಾ ಕಾಲೇಜು ಪುತ್ತೂರು -574 202 ಕರ್ನಾಟಕದ ಆಡಳಿತಾತ್ಮಕ ಕಛೇರಿಯಿ೦ದ ಅಥವಾ ಜಾಲತಾಣದಿ೦ದ ನಿರ್ದಿಷ್ಟ ಅರ್ಜಿಯನ್ನು ಪಡೆಯಬಹುದು. ಸರಿಯಾಗಿ ತುಂಬಿದ ಅರ್ಜಿ ನಮೂನೆಯುನ್ನು ನೋಂದಣಿ ಶುಲ್ಕ ರೂ.೧೦/- ನ್ನು ಪಾವತಿಸಿ ನೋಂದಣಿಗಾಗಿ ಕಾಲೇಜ್ ಕಛೇರಿಗೆ ಹಿ೦ದಿರುಗಿಸಬೇಕು. ಅರ್ಜಿಯ ಜೊತೆಗೆ ಹಿ೦ದಿನ ಪರೀಕ್ಷೆಯ ಫಲಿತಾ೦ಶದ ಅ೦ಕಗಳನ್ನು ನಮೂದಿಸಿದರೂ ಸಾಕಾಗುತ್ತದೆ. ಎಸ್ಸಿ / ಎಸ್ಟಿ / ಬಿಟಿ ಗುಂಪುಗಳಿಗೆ ಸೇರಿದ ವಿದ್ಯಾರ್ಥಿಗಳು ಸಮರ್ಥ ಅಧಿಕಾರಿ ನೀಡಿದ ಸರಿಯಾದ ಪ್ರಮಾಣಪತ್ರಗಳನ್ನು ಅರ್ಜಿಯೊ೦ದಿಗೆ ಲಗತ್ತಿಸಬೇಕು. ನೋಂದಣಿಗೆ ಕೊನೆಯ ದಿನದಿಂದ ೧೫ ದಿನಗಳ ಒಳಗಾಗಿ ಅರ್ಜಿದಾರರಿಗೆ ಅವರ ತಾತ್ಕಾಲಿಕ ಆಯ್ಕೆ ಮತ್ತು ಸಂದರ್ಶನದ ವೇಳಾಪಟ್ಟಿಯನ್ನು ಅಂಚೆಯ ಮುಖಾಂತರ ತಿಳಿಸಲಾಗುವುದು.
ಸಂದರ್ಶನದ ಸಮಯದಲ್ಲಿ, ಅರ್ಜಿದಾರನು/ಳು ಈ ಕೆಳಗಿನ ಪ್ರಮಾಣಪತ್ರಗಳನ್ನು / ದಾಖಲೆಗಳನ್ನು ಸಲ್ಲಿಸಬೇಕು:

  • ವರ್ಗಾವಣಾ ಪ್ರಮಾಣ ಪತ್ರ (TC).
  • ಪಿ.ಯು.ಸಿ. ಸಂಚಿತ(cumulative) ದಾಖಲೆ ಅಥವಾ ಸಮನಾದ ಅ೦ಕಪಟ್ಟಿ.
  • ಗುಣ ನಡತೆಯ ಪ್ರಮಾಣ ಪತ್ರ.
  • ಮೂರು ಪಾಸ್ಪೋರ್ಟ್ ಗಾತ್ರದ ಭಾವಚಿತ್ರಗಳು.
  • ಮೀಸಲಾತಿ / ರಿಯಾಯಿತಿಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಪುರಾವೆಯಾಗಿರುವ ದಾಖಲೆ.
  • ವಿಶ್ವವಿದ್ಯಾನಿಲಯದಿಂದ ನೀಡುವ ವಲಸೆ ಪ್ರಮಾಣ ಪತ್ರ(ಹೊರ ರಾಜ್ಯ ವಿದ್ಯಾರ್ಥಿ/ನಿ ಯಾಗಿದ್ದಲ್ಲಿ).

ಆಯ್ಕೆಯಾದ ವಿದ್ಯಾರ್ಥಿಗಳು ನಿರ್ಧರಿಸಿದ ಶುಲ್ಕವನ್ನು ಪಾವತಿಸಿದ ನ೦ತರ ಅವರನ್ನು ದಾಖಲೆಗಳಲ್ಲಿ ದಾಖಲಿಸಲಾಗುವುದು.


ಅಧ್ಯಯನ ವಿಷಯಗಳು

ಸಂತ ಫಿಲೋಮಿನಾ ಕಾಲೇಜು ವಿವಿಧ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿಷಯಗಳನ್ನು ನೀಡುತ್ತದೆ. ಅನ್ವೇಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ