ಸಂಸ್ಥೆ:

ನಮ್ಮ ರಾಜ್ಯದ ಈ ಭಾಗದಲ್ಲಿರುವ ಜನರು ಬೇರೆ ಬೇರೆ ಸ್ಥಳಗಳಿಗೆ ಉನ್ನತ ಶಿಕ್ಷಣಕ್ಕಾಗಿ ತೆರಳುತ್ತಿರುವುದನ್ನು ಮನಗಂಡು ಮೆ.ಫಾ. ಪತ್ರಾವೋ ಅವರು ಸಂತ ಫಿಲೋಮಿನಾ ಕಾಲೇಜು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಸಂಸ್ಥೆಯನ್ನು ಪ್ರಾರಂಭಿಸಬೇಕೆಂಬ ಅವರ ಈ ಕನಸು ಸಾಕಾರಗೊಂಡದ್ದು ೧೯೫೮ ರಲ್ಲಿ . ಶಿಕ್ಷಣ ಸಂಸ್ಥೆ ಪ್ರಾರಂಭವಾದಾಗಿನಿಂದ ಕಾಲೇಜು ಸ್ಥಿರವಾಗಿ ಬೆಳೆಯುತ್ತಿದ್ದು, ಉತ್ತಮ ಗುಣಮಟ್ಟವು ಪರಿಣಾಮಾತ್ಮಕ ಬೆಳವಣಿಗೆಗೆ ಪೂರಕವಾಗಿದೆ. ಕಾಲೇಜು ದೂರದ ಹಾಗೂ ಬಹು ದೊಡ್ಡ ಸಂಖ್ಯೆಯ ಯುವ ಜನತೆಗೆ ಶಿಕ್ಷಣ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವಿದ್ಯಾರ್ಥಿಗಳು ತಾರತಮ್ಯವಿಲ್ಲದೆ ದಾಖಲಾತಿ ಹೊಂದುತ್ತಾರೆ. ಮೆ. ಪತ್ರಾವೋ ಅವರು ಸಂಸ್ಥೆಯ ಉಸ್ತುವಾರಿಯನ್ನು ತಾಯಿಯಂತೆ ಕಾಳಜಿಯಿಂದ ನಿರ್ವಹಿಸಿದವರು ಇವರ ಬಳಿಕ ಇವರ ಉತ್ತರಾಧಿಕಾರಿಗಳೂ ಇವರನ್ನೇ ಅನುಸರಿಸಿದರು. ಇದರ ಪರಿಣಾಮವಾಗಿ ಕಾಲೇಜು ಶಿಸ್ತಿನ ನಿರ್ವಹಣೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡೆ ಮತ್ತು ಆಟಗಳ ಕ್ಷೇತ್ರಗಳಲ್ಲಿ ಹೆಸರನ್ನು ಗಳಿಸಿದೆ. ಸಂಸ್ಥೆಯ ಮೂಲಭೂತ ಸೌಕರ್ಯ, ಕಲಿಕೆ ಸಂಪನ್ಮೂಲಗಳು ಮತ್ತು ಸಾಧನೆಗಳ ಆಧಾರದ ಮೇಲೆ ನ್ಯಾಕ್ ಸಂಸ್ಥೆ ಕಾಲೇಜಿಗೆ “ಎ” ಶ್ರೇಣಿಯೊಂದಿಗೆ ಮರು ಮಾನ್ಯತೆ ನೀಡಿದೆ.
 

 


ಇತಿಹಾಸ:

ಮೆ.ಫಾ.ಆಂಟನಿ ಪತ್ರಾವೋ ಸ್ಥಾಪಕ

ಮೆ.ಫಾ. ಪತ್ರಾವೋ ಅವರು ೧೦-೧೨-೧೯೦೧ ರಂದು ಜನಿಸಿದರು. ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೆಜಿನಲ್ಲಿ ಅಧ್ಯಯನ ಮಾಡಿ, ನಂತರ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ ಜೋಸೆಫ್ ಸೆಮಿನಾರಿಯನ್ನು ಸೇರಿದರು. ಅವರಿಗೆ ೦೩-೧೨-೧೯೯೭ ರಂದು ದೀಕ್ಷೆ ನೀಡಲಾಯಿತು ಹಾಗೂ ೦೮-೧೦-೧೯೩೯ರಂದು ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ನ ಪ್ಯಾರಿಷ್ ಪ್ರೀಸ್ಟ್ ಆಗಿ ನೇಮಿಸಲಾಯಿತು.ಜನರ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಮೆ.ಫಾ. ಪತ್ರಾವೋ ಅವರು ಪುತ್ತೂರಿನ ಎಲ್ಲಾ ಮನೆ, ಮನಗಳಲ್ಲಿ ಹೆಸರುವಾಸಿಯಾದರು.

ಅವರು ಲೋಕೋಪಕಾರಿ ಹಾಗೂ ಮಹಾನ್ ದಾರ್ಶನಿಕರಾಗಿದ್ದು ನಂತರದ ದಿನಗಳಲ್ಲಿ ಪುತ್ತೂರಿನಲ್ಲಿ ಹಲವು ಸಂಸ್ಥೆಗಳನ್ನು ಸ್ಥಾಪಿಸಿದರು.

 • ಮಾಯಿದೆ ದೇವುಸ್ ಪ್ರಾಥಮಿಕ ಶಾಲೆ
 • ಸಂತ ವಿಕ್ಟರನ ಬಾಲಕಿಯರ ಪ್ರೌಢ ಶಾಲೆ
 • ಸಂತ ಫಿಲೋಮಿನಾ ಪ್ರೌಢ ಶಾಲೆ
 • ಸಂತ ಫಿಲೋಮಿನಾ ಕಾಲೇಜು
 • ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ
 • ಫಾ. ಪತ್ರಾವೋ ಆಸ್ಪತ್ರೆ

ಮಾನವ ಕುಲದ ಕಲ್ಯಾಣಕ್ಕೆ ಉಪಯುಕ್ತವಾದ ಜೀವನವನ್ನು ನಡೆಸಿದ ನಂತರ ಫಾ.ಪತ್ರಾವೋ ೧೪-೦೫-೧೯೭೫ ರಂದು ತಮ್ಮ ೭೪ನೆಯ ವಯಸ್ಸಿನಲ್ಲಿ ಅಗಲಿದರು

                                                               ಅವರಿಗೆ ದೇವರು ಶಾಶ್ವತವಾದ ವಿಶ್ರಾಂತಿಯನ್ನು ನೀಡಲಿ

 


ದೃಷ್ಟಿ ಕೋನ:

ಉನ್ನತ ಶಿಕ್ಷಣಕ್ಕಾಗಿ ಪ್ರಧಾನ ಸಂಸ್ಥೆಯಾಗಿದ್ದು, ಶೈಕ್ಷಣಿಕ ಮತ್ತು ಸಮಾಜಕಲ್ಯಾಣ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುವುದು.

 


ಗುರಿ:

ಸಮಾಜಕ್ಕೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಹಾಗೂ ತಮ್ಮ ಸಮಗ್ರ ಅಭಿವೃದ್ಧಿಗಾಗಿ ಯುವ ಜ್ಞಾನಾರ್ಥಿಗಳಿಗೆ ಮತ್ತು ಅನ್ವೇಷಕರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು.

 


ಉದ್ದೇಶಗಳು:

 • ಯುವ ಅನ್ವೇಷಕರಿಗೆ ಉನ್ನತ ಜ್ಞಾನ ಹಾಗೂ ಅವಕಾಶಗಳನ್ನು ಒದಗಿಸಲು.
 • ನಿರಂತರ ಸಮರ್ಥನೀಯ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ವಿವಿಧ ಸಾಮಾಜಿಕ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲು.
 • ಸಾಮಾಜಿಕ ಅಗತ್ಯತೆಗಳು ಮತ್ತು ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳನ್ನು ಸಂವೇದನಾಶೀಲರನ್ನಗಿ ಮಾಡಲು.
 • ವಿದ್ಯಾರ್ಥಿಗಳ ಎಲ್ಲಾ ಸ್ತರಗಳ ಬೆಳವಣಿಗೆಗೆ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಲು.
 • ತಮ್ಮ ವೃತ್ತಿ ಜೀವನದ ಅವಕಾಶಗಳನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು.

 


ಅಧ್ಯಯನ ವಿಷಯಗಳು

ಸಂತ ಫಿಲೋಮಿನಾ ಕಾಲೇಜು ವಿವಿಧ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿಷಯಗಳನ್ನು ನೀಡುತ್ತದೆ. ಅನ್ವೇಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ